ದೀನ ನಾನು ಸಮಸ್ತ
ಲೋಕಕೆ ದಾನಿ ನೀನು
ವಿಚಾರಿಸಲು ಮತಿ ಹೀನ ನಾನು ಕೈವಲ್ಯ ಪತಿ ನೀನು!
ಏನ ಬಲ್ಲೆನು ನಾನು
ನಡೆಸು ಜ್ನಾನ ಮೂರುತಿ ನೀನು
ನಿನ್ನ ಸಮಾನರುಂಟೆ ದೇವ ರಕ್ಷಿಸು ನಮ್ಮನನವರತ!!೧!!
ಗಿಳಿಯ ಮರಿಯನು ತಂದು
ಪಂಜರದೊಳಗೆ ಪೋಶಿಸಿ, ಕಲಿಸಿ
ಮ್ರುದು ನುಡಿಗಳನು ಲಾಲಿಸಿ ಕೇಳ್ವ ಪರಿಣಿತರಂತೆ ನೀನೆಮಗೆ!
ತಿಳಿಹು ಮತಿಯನು ಎನ್ನ
ಜಿಹ್ವೆಗೆ ಮೊಳಗುವಂದದಿ ನಿನ್ನ
ನಾಮಾವಳಿಯ ಪೊಗಳಿಕೆಯನಿತ್ತು ರಕ್ಷಿಸು ನಮ್ಮನನವರತ!!೨!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
'ನಡೆಸು ಜ್ಞಾನ' ಎಂಬುದು ತಪ್ಪು 'ನೆರೆ ಸುಜ್ಞಾನಿ' ಸರಿಯಾದ ರೂಪ
ಪ್ರತ್ಯುತ್ತರಅಳಿಸಿನೆರೆ ಸುಜ್ಞಾನ ಮೂರುತಿ ನೀನು ಸರಿ
ಅಳಿಸಿ