"ಈ ಗುಲಾಬಿಯು ನಿನಗಾಗಿ ಇದು ಸೂಸುವ ಪರಿಮಳ ನಿನಗಾಗಿ..." ಪುರಂದರ ದಾಸರ ೩೩೫ನೇ ಮೇಳಕರ್ತಾ ರಾಗದಲ್ಲಿ ಹಾಡಲು ಶುರು ಮಾಡಿದ ಪ್ರವಾದಿಯ ಬಾಯಿ ಮುಚ್ಚಿಸಬೇಕೋ ಅಥವಾ ಈಗ ಗುಲಾಬಿ ಮೇಡಮ್ English class ಎಂದು ನೆನಪಿಸಿದ್ದಕ್ಕೆ thanks ಹೇಳಬೇಕೋ ಎಂದು ಯೋಚಿಸುತ್ತಿರುವಷ್ಟರಲ್ಲಿ ಮೇಡಂ classಗೆ entry ಕೊಟ್ಟಾಗಿತ್ತು. ನಗುವನ್ನು ಮರೆಮಾಚಿ ಎದ್ದುನಿಂತು "ನಗುವಾ .... " ಎಂದು ಹಾಡಿ(ಸ್ವಗತ) ಕುಳಿತೆವು. ನಿಮ್ಮ ತಲೇಲಿ ಪುರಂದರ ದಾಸರ ಮೇಳಕರ್ತಾ ರಾಗ, ಅದೂ ೩೩೫ನೇದು ಯಾವುದು? ಅಂತ ಕೊರಿತಿದೆ ಅನ್ಸುತ್ತೆ. ಅದಕ್ಕೋಸ್ಕರ ನೀವು Google ಗೆ ಹೋಗಿ ಹುಡುಕೋದು? ಅದು ಸಿಗದೆ ತಲೆ, ಮೈ ಪರಚಿಕೊಳ್ಳೋದು ಎಲ್ಲ ಬೇಡ. So ಮೊದ್ಲೇ ಹೇಳಿ ಬಿಡ್ತೀನಿ. ಈ ತಿರುಕರ ಬಿಕ್ಷೆ ಬೇಡೋ ರೀತಿ ನಿಮಗೆಲ್ಲಾ ಗೊತ್ತಿದೆ ತಾನೆ? ಅವರು ಕೂಗ್ತಾರಲ್ವ ಅದನ್ನ ನಾವು ಸ್ವಲ್ಪ ಸ್ಟೈಲಾಗಿ ಹೀಗೆ ಕರೀತಿವಿ. ಬೇಜಾರಿಲ್ಲ ತಾನೆ?
ನಾನು ಹೇಳೋಕೆ ಹೊರಟಿರೋದು ನನ್ನ PU college ದಿನಗಳ ಬಗ್ಗೆ. ಮೊದಲನೇ ಬಾರಿ Pant ಹಾಕ್ಕೊಂಡು (ಅಲ್ಲಿ ತನಕ ಏನು ಹಕ್ತಿರ್ಲಿಲ್ಲ ಅಂತಲ್ಲಾ ಸ್ವಾಮಿ ಮೊದಲು ಚಡ್ಡಿ ಹಾಕ್ತಿದ್ದೆ ಅಂತ ಅದರರ್ಥ. ಜನ ಬುದ್ದಿವಂತರಾಗೋಕ್ ಹೋಗಿ ಅಪಾರ ಅರ್ಥ ಮಾಡ್ಕೊಳೋರ್ ಸಂಖ್ಯೆ ಜಾಸ್ತಿ ಆಗಿದೆ. ಕಲಿಯುಗ!!!???) college ಮೆಟ್ಟಿಲು ಹತ್ತಿ classಗೆ entry ಕೊಟ್ರೆ ಎಲ್ಲ ಹೊಸ ಮುಖಗಳೇ ಕಾಣಿಸಿದ್ವು. ಅದೇ ಸಮಯಕ್ಕೆ ನನ್ನ ಹೆಸರು ಹಿಡಿದು ಯಾರೋ ಕೂಗಿದ ಹಾಗಾಯ್ತು. ಹುಡುಗರ ಸಾಲಿನಲ್ಲಿ ಹುಡುಕ ತೊಡಗಿದೆ. ಮತ್ತೊಮ್ಮೆ ಕರೆದರು. ಆದರೆ ದ್ವನಿ ಬರ್ತಿರೋದು ಹುಡುಗಿಯರ ಸಾಲಿನಿಂದ. ನಂಗೆ ಯಾವ ಹುಡುಗಿಯರು ಪರಿಚಯ ಇಲ್ವಲಾ? ಹುಡುಗಿಯರೇ ragging ಮಾಡೋಕ್ ಕರೀತಿದಾರಾ? ಆ ಕಡೆ ತಿರ್ಗೋದೋ ಬೇಡ್ವೋ? ಅಂತ ಮನದಲ್ಲೇ ಯೋಚಿಸಿ " ಕತ್ತಿ ಹೆಗಲಲ್ಲಿಟ್ಟು ತಾನೆಯು! ಮತ್ತೆ ಬರುವಳು ಹಿಂದೆ ಮುಂದೆಯು! ..... ಮತ್ತೆ ಚಿಂತೆತ್ತಣದು ಭಯ ದೇವಿ ಕಾದಿರೆ! ಸತ್ಯ ನುಡಿಯಿದು ಭಯವದಿಲ್ಬ್ರಹ್ಮಾದಿಗಳದೆಂದ!" (ಜಗನ್ಮಾತೆಯ ನೆನೆವವರಿಗೆ ಯಾರಿಂದಲೂ ಭಯವಿಲ್ಲ) ದೇವೀಮಹಾತ್ಮೆಯ ಒಂದು ಷಟ್ಪದಿಯ ಮೂಲಖ ತಾಯಿಯನ್ನು ಈ ಭೂಲೋಕದ ನಾ(ಮಾ)ರಿಯರಿಂದ ರಕ್ಷಿಸೆಂದು ಬೇಡತೊಡಗಿದೆ. ಅಷ್ಟರಲ್ಲಿ ಆಚಾರಿ ಅದೆಲ್ಲಿಂದನೋ ಬಂದು ತನ್ನ ಸ್ಥಳಕ್ಕೆ ಕರೆದುಕೊಂಡು ಹೋದ.
ನಮ್ಮ ಬೆಂಚ್ ನಲ್ಲಿ govt ಹೈಸ್ಕೂಲ್ ಸಹಪಾಠಿಗಳೇ ಇದ್ರು ಪ್ರವಾದಿ, ಆಚಾರಿ, ಮಾರೀಚ, ಇನ್ನೊಬ್ಬ ಪ್ರವಾದಿಯ ಸಂಬಧಿಕ. ಅವನ ಪರಿಚಯನು ಆಯಿತು. ಅಷ್ಟರಲ್ಲೆ lecturer ಬಂದ್ರು. ಪಾಠ ಮಾಡೋದು ಬಿಟ್ಟು ಎಲ್ಲರ ಹೆಸರು ಕೇಳೋಕ್ ಶುರು ಮಾಡಿದ್ರು. ನಮ್ಮ ಮುಂದಿನ ಬೆಂಚ್ ತನಕನೂ ಬಂದಾಯ್ತು. ಈಗ ಮೈಯೆಲ್ಲ ಕಿವಿಯಾಗಿಸಿ ಕೇಳೋಕ್ ಶುರುಮಾಡಿದ್ವಿ.
ಶ್ರುತಿ G M . SJ………….S Sringeri. ಎಲ್ಲರು ಒಬ್ರಿಗೊಬ್ರು ಮುಖ ನೋಡ್ಕೊಂಡ್ವಿ.
ಮತ್ತೆ ಶ್ರುತಿ H L SJ A………….S Sringeri. ಎರಡನೇದು.
ನಾನು ಸುಮ್ನಿರಲಾರ್ದೆ ಕೇಳೇಬಿಟ್ಟೆ.ಲೇ ಪ್ರವಾದಿ Sringeri ಜೊತೆ ABCD, ಅದೂ ಉಲ್ಟಾ ಪಲ್ಟಾ ಯಾಕೋ ಹೇಳ್ತಿದಾರೆ? ಮುಂದಿನ ಬೆಂಚ್ ನ ಅಷ್ಟೂ ಜನ ತಿರುಗಿ ದರ್ಶನ ಕೊಟ್ರು. ಹೀಗೆ ಒಟ್ಟಿಗೆ ನೋಡಿದ್ರೆ ಯಾರನ್ನ ನೋಡೋದು ಯಾರನ್ನ ಬಿಡೋದು ಅನೋದೇ ಅರ್ಥ ಆಗ್ಲಿಲ್ಲ. ಸುಮ್ನೆ ಹೇಳಿದೆ, Actually ಎಲ್ಲರು ಗುರಾಯಿಸಿದ್ರು. ನನ್ನ ಉಸಿರು ಕೂಡ ಬಂದ್ ಆಯಿತು.
ಮತ್ತೆ ಇಬ್ರು ಅದನ್ನೇ repeat ಮಾಡಿ ಕೂತ್ರು. ಈಗ ಸ್ವಲ್ಪ ನಿಧಾನಕ್ಕೆ ವಿಪ್ರನಿಗೆ ಹೇಳಿದೆ. ಯಾವುದೋ ಒಂದು alphabet ಮಿಸ್ ಆಗ್ತಿದೆ ಅಲ್ವಾ ಅಂತ. ನನ್ನ ಕರ್ಮ ಅದೂ ಕೇಳಿಸ್ ಬೇಕೇ? ಈ ಬಾರಿ ನಾನು ಅವರ ಕರುಳೊಳಗೇ ಹೋದ್ನೇನೋ ಅನ್ನಿಸಿಬಿಡ್ತು. ತಿನ್ನೋ ಹಾಗೆ ನೋಡಿದ್ರು. ( ರೌದ್ರಂ ರೌದ್ರಾಂತಕಂ ಘೋರಂ) ಆಮೇಲೆ ಅವತ್ತಿಡಿ ಮಾತೇ ಹೊರಡ್ಲಿಲ್ಲ.
ಇಷ್ಟರಲ್ಲಾಗಲೇ ನಿಮಗೆ ನಾನು ಮೊದಲು ಹೇಳಿದ ಘಟನೆ(ಹುಡುಗಿಯರ ಸಾಲಿನಿಂದ ಬಂದ ದ್ವನಿ) ನಡೆದಿರಬಹುದಾದ ರೀತಿ ಅರ್ಥ ಆಗಿರಬಹುದು. ಹ್ನೂಂ ನಾನು ಹೋಗಿ ಕೂತಿದ್ದು ಲಲನಾಮಣಿಯರ ಹಿಂದೆ. ಅವರೆಲ್ಲಾ ನಮ್ಮ ಊರಿನ ಶ್ರೀ ಜಗದ್ಗುರು ಅಭಿನವ ವಿದ್ಯಾತೀರ್ಥ ಬಾಲಿಕಾ ಪ್ರೌಡಶಾಲೆಯಿಂದ ಬದವರು. ಆ ಶಾಲೆಯ ಹೆಸರಿನ shortform
ಉಂಟಲ್ವಾ ಅದನ್ನೇನಾದ್ರು ನೀವು ಒಂದೇ ಸರಿ ಕೇಳಿ ನೆನಪಿಟ್ಟುಕೊಂಡ್ರೆ ನಿಮಗೆ ನೊಬೆಲ್ guarantee.
ನಿಮಗೆ ಗೊತ್ತೇ ಇದೆ ಹುಡುಗಿಯರು ಹತ್ರ ಇದ್ರೆ ಹುಡುಗ್ರ ಕತೆ ಮಂಗಕ್ಕೆ ಹೆಂಡ ಕುಡಿಸಿ ಬಿಟ್ಟ ಹಾಗೆ ಅಂತ. ಅದು ನಮಗೂ ಆಗಿತ್ತು. ಎಲ್ಲಾ period ನಲ್ಲೂ ಏನಾದ್ರು ಒಂದು ತಮಾಶೆ ಮಾಡ್ತಾ ಅದ್ರಲ್ಲೂ temporary lecturers (ಗುಲಾಬಿ ಮೇಡಂತರದವ್ರನ್ನ)ನ ಗೋಳು ಹೊಯ್ಕೊಳ್ತಿದ್ವಿ. ಹೀಗೇ ಒಂದ್ಸಲ ಪ್ರವಾದಿ ಏನೋ ತಮಾಶೆ ಮಾಡೋಕ್ ಹೋಗಿ ಹುಡುಗಿಯರು ಗಟ್ಟಿಯಾಗಿ ನಗಾಡಿ ಸಿಕ್ಕಿಬಿದ್ದು ಎಲ್ಲ ಆಗಿತ್ತು.
ಅವರೆಲ್ಲಾ ಆಮೇಲೆ ಒಳ್ಳೆ friends ಕೂಡ ಆದ್ರು. ನಮ್ಮಹತ್ರ doubts ಕೂಡ ಕೇಳ್ತಾ ಇದ್ರು. ಒಂದೂವರೆ ವರ್ಷ ತುಂಬಾನೇ ಎಂಜಾಯ್ ಮಾಡಿದ್ವಿ. ಇನ್ನೂ ತುಂಬಾ ವಿಷಯಗಳಿದಾವೆ ಇದರ ಬಗ್ಗೆ, ಅದನ್ನೆಲ್ಲಾ ಬರೀತಾ ಹೋದರೆ ರಾಮಾಯಣ, ಮಹಾಭಾರತ ಅಧ್ಯಾಯಗಳ ಸಂಖ್ಯೆಯನ್ನೂ ಮೀರಿಸಬಹುದು. ಅದನ್ನೆಲ್ಲಾ ಇನ್ನೊಮ್ಮೆ ಯಾವಾಗ್ಲಾದ್ರು ಹೇಳ್ತೀನಿ.
"ಸ್ನೇಹ ಅತಿ ಮಧುರ.. ಸ್ನೇಹ ಅದು ಅಮರ" ಏನಂತೀರಿ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Hahah.. Quite interesting :-)Reminded those [g]olden days!
ಪ್ರತ್ಯುತ್ತರಅಳಿಸಿNa. Go. Pra.
hi Jita, I'm one of your fan follower it is been while you have posted your article. what happened? you are not writing any more? pls continue writing don't give up!
ಪ್ರತ್ಯುತ್ತರಅಳಿಸಿNice, good to read and funny incidents..
ಪ್ರತ್ಯುತ್ತರಅಳಿಸಿ