ಬುಧವಾರ, ಜೂನ್ 9, 2010

ಸಾವಿರದ ಶರಣು

ಏಕನೆಂಬರು, ಅನೇಕನೆಂಬರು,
ಎಲ್ಲೆಲ್ಲು ಇಹನೆಂಬರು,
ಅವನನು ತೋರ್ವ ಗುರುವು ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,

ಕಷ್ಟದೊಳ್ ಸಾವಿರ ಉಪಾಯ ಪೇಳುತ,
ನೂಲನಡಿಗೆ ಸಂಸಾರ ಇದೆಂಬರು,
ಹೆಜ್ಜೆಗೆ ಹೆಜ್ಜೆ ಸೇರಿಸೊ ಬಂಧು ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,

ಎನ್ನಯ ಮೂಳೆ ಚಾಣವಾಗಿಸಿ
ಬಂಡೆಯ ಕೆತ್ತಿ ವಿಗ್ರಹ ಮಾಳ್ಪೆ
ಪ್ರಾಣವನೀವ ದೈವ ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,

ನಂದಾದೀಪ ಆರುವವರೆಗೆ
ನೀಡುವೆ ಆನಂದ ನಿಮಗೆ
ಎನ್ನಯ ಚಿತೆಯೂ ಸಂತಸವಿತ್ತೆಡೆ
ಸಾವಿರ ಪ್ರಣಾಮ ಶಿವಗೆ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ