ಸೋಮವಾರ, ಮಾರ್ಚ್ 22, 2010

ಪದಬಂಧ

(ಮಾದ್ವ ಹಾಸ್ಟೆಲ್ ನ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪದಬಂಧ ಸ್ಪರ್ಧೆಗಾಗಿ ತಯಾರಿಸಿದ್ದು -೨೦೦೬)



ಎಡದಿಂದ ಬಲಕ್ಕೆ
1. ನೂಲು ಹಿಡಿದು ನ್ಯಾಯಾಲಯಕ್ಕೆ ಬಂದ ಫಿರ್ಯಾದಿ. (4)
3. ರಾಮಪುತ್ರ ಬಂದು ಕ್ಷೇಮಸಮಾಚಾರ ವಿಚಾರಿಸಿದನೆ? (3)
6. ರಣವಲ್ಲದ್ದು, ಕಾಡಗಿದೆ. (3)
7. ಶಾಖದೊಂದಿಗೆ ಮರ್ಯಾದೆ ಸೇರಿ ಉಷ್ಣತೆಯಾಗಿದೆ. (4)
9. ಮನುಷ್ಯನಲ್ಲಿ ಹುಟ್ಟಿದುದು ಸಮಸ್ತರಿಗೂ ತಿಳಿದಿದೆ. (5)
11. ಲವ ತಂದ ಉಪ್ಪು. (3)
13. ಹರನು ಮಧ್ಯೆ ಕುಳಿತು ಸಮಯ ವ್ಯರ್ಥ ಮಾದಿದನೇ? (5)
16. "ಯಾವಾಗಲೂ" ಎನ್ನುವುದನ್ನು ಹೀಗೂ ಹೇಳಬಹುದೇ? (5)
19. ಅರಸ ಬರುತ್ತಿದ್ದಾನೆ ಅವನನ್ನು ಹೊಗಳಿ (ಪರಾಕು) (7)
21. ಬಾಣದೊಂದಿಗೆ ಬಂದ ರಷ್ಯಾದ ಟೆನ್ನಿಸ್ ಆಟಗಾರ್ತಿ. (4)
ಮೇಲಿನಿಂದ ಕೆಳಕ್ಕೆ.
1. ಕೈಗಳ ಮಧ್ಯೆ ಅವತರಿಸಿದ ಚಿನ್ನ. (4)
2. ಶೀರ್ಷಾಸನ ಹಾಕಿದ "ವೈಶ್ರವಣ" ಉತ್ತರ ದಿಕ್ಕಿನ ಅಧಿಪತಿ.(3)
4. ಬಳ್ಳಿಯೊಂದಿಗೆ ಸಿಕ್ಕ ಹಣ್ಣು. (4)
5. ಅಂಜನ ಹಾಕಿಕೊಂಡು ಏರಿದ ಕಟಕಟೆ (4)
6. ಎಣ್ಣೆ ಹಚ್ಚಿ ಮಾಡಿದ ಸ್ನಾನ (4)
8. ಯುದ್ದಭೂಮಿಯಲ್ಲಿ ಮಾಡಿದ ಹೋಮ (3)
10. ಶೀರ್ಷಾಸನ ಹಾಕಿದ ಕಾರ್ಮೋಡದ ಸಾಲುಗಳು (4)
12. ದಾನಶೂರ ಕರ್ಣನ ಈ ಹೆಸರು ಪೃಥ್ವಿಯನ್ನು ಸೀಳಿ ಬಂದಿದೆ. (4)
14. ಇಂದ್ರನಿಂದ ಕೆಳದವಡೆಗೆ ಪೆಟ್ಟುತಿಂದರೂ ಅನುಮಾನವಿಲ್ಲ, ಈತ ಪರಾಕ್ರಮಿ. (4)
15. "ಬಚ್ಚ" ನಲ್ಲದಿದ್ದರೂ ಖ್ಯಾತ. ಈತ ತಲೆಕೆಳಗಾದ ಹಿಂದಿ ನಟ. (4)
17. ನರಿಯಲ್ಲಿರುವ ವಿಷ್ಣು. (4)
18. ವೃಕ್ಷದ ನಡುವೆ ಬಂದ ಬದಲಾವಣೆಯ ಕಾಲ ತಲೆಕೆಳಗಾಗಿದೆ. (4)
20. ರಂಗನಾಯಕನ ಪತ್ನಿಯಾದ ಲಕ್ಶ್ಮಿಯು ಆತನನ್ನು "ಕಮಲದ ಕಣ್ಣು"ಳ್ಳವನೇ ಎಂದು ಸಂಭೋದಿಸಿ ಎಬ್ಬಿಸುತ್ತಿದ್ದಾಳೆ.(ತಲೆಕೆಳಗಾಗಿದೆ) (6)

ಬುಧವಾರ, ಮಾರ್ಚ್ 17, 2010

ಪಂಚಾಂಗ.

ತಿಥ್ಯೇಶ್ಚ ಶ್ರೀಯಮಾಪ್ನೋತಿ ವಾರಾತ್ ಆಯುಷ್ಯವರ್ಧನಮ್ !
ನಕ್ಷತ್ರಾತ್ ಹರತೇ ಪಾಪಮ್ ಯೋಗಾತ್ ರೋಗನಿವಾರಣಮ್ !
ಕರಣಾತ್ ಕಾರ್ಯಸಿದ್ದಿಶ್ಚಾತ್ ಪಂಚಾಂಗಂ ದಶಮೇ ಫಲಮ್ !!

ವಿಕೃತಿ ಸಂವತ್ಸರದ ಪಂಚಾಂಗವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
www.sringeri.net/wp-content/uploads/2010/02/2010_kannada.pdf

ಮಂಗಳವಾರ, ಮಾರ್ಚ್ 16, 2010

ನಂಬಬೇಡಿರೋ...

ನಂಬಬೇಡಿ ನಾರಿಯರನು ಹಂಬಲ ಹಾರೈಸಬೇಡಿ ಪ
ಅಂಬುಜಾಕ್ಷಿಯರೊಲುಮೆ ಡಂಭಕವೆಂದು ತಿಳಿಯಿರೊ ಅ

ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು, ಸನ್ನೆ
ನೋಟವೆಲ್ಲ ಘನ್ನ ಘಾತಕ ಕೂಟವೆಲ್ಲ ವಂಚನೆ
ಪಾಟುಗೆಟ್ಟು ಹೆಂಗಳೊಡನೆ ಕೋಟಲೆಗೊಂಡು ತಿರುಗಬೇಡಿ
ನೀಟುಗಾರತಿಯರೊಲುಮೆ ಬೂಟಕವೆಂಡು ತಿಳಿಯಿರೊ

ಸೋತೆನೆಂದು ವಿಟಗೆ ದೈನ್ಯ ಮಾತನಾಡಿ ಮರುಳುಗೊಳಿಸಿ
ಕಾತರವನು ಕೊಟ್ಟು ಅವನ ಮಾತಾಪಿತರ ತೊಲಗಿಸಿ
ಪ್ರೀತಿಪಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ ಜಾತಿಕಾರ ಹೆಂಗಳ

ಧರಣಿಜನರು ಕೇಳಿ ಲೇಶ ಕರುಣವಿಲ್ಲ ನಾರಿಯರಿಗೆ
ಎರಳೆಕಂಗಳ ಹೆಂಗಳೊಲುಮೆ ಬರೆಹ ನೀರಮೇಲಿನ
ಸರಸಮುಖಿಯರಿರವ ನೀವು ಬರಿದೆ ನಂಬಿ ಕೆಡಲುಬೇಡಿ
ಗುರುಪುರಂದರ ವಿಠಲರಾಯನ ಚರಣವ ನಂಬಿ ಬದುಕಿರೊ
(ಕ್ರುಪೆ- http://haridasa.sampada.ನೆಟ್ )

ಶುಕ್ರವಾರ, ಮಾರ್ಚ್ 12, 2010

ತಾಂಗದಿನ್ನ ದಿನ್ನ ದೀಮ್


ಗಜಮುಖ ನಾ ನಿನ್ನ ಪಾದವ ನೆನವೆ,
ಪ್ರತಿಯಾಗಿ ಕರುಣಿಸು ವರಗಳ ಪ್ರಭುವೇ.....
ಆ ಹಾಡಿಗೆ ಮನ ಸೋತು ಹೋಯಿತು. ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮಲಗಿದವನು ನಿದ್ದೆಲೂ ಇದೇ ಹಾಡು. ಎಚ್ಚರ ಆದಮೆಲೆ ನೋಡ್ತಿನೀ, ಎಲ್ಲರೂ ನನ್ನನ್ನ ನೋಡಿ ನಗ್ತಾ ಇದಾರೆ. ಏನಾಯ್ತಪ್ಪ ಅಂತ ಮೊದಲು ಚಡ್ಡಿ ಕಡೆ ನೋಡ್ಕೊಂಡೆ. ಒದ್ದೆ ಆಗಿಲ್ಲ. ಮತ್ತೇನು ಅಂತ ಕಣ್ಣು ಬಾಯಿ ಬಿಟ್ಕೊಂಡು ಅಮ್ಮನ ಮುಖ ನೋಡಿದೆ. ಅವಳು ನಗ್ತಾ ಇದ್ದಳು. (ನಮ್ಮ ಕಡೆ ಎಲ್ಲ ಅಮ್ಮಂಗೆ ನೀನು ಅಂತಾನೆ ಕರೆಯೋದು. ಮಹಿಳ ಮೀಸಲಾತಿ ಬಗ್ಗೆ ದನಿ ಎತ್ತಬೇಡಿ ಮಾರಾಯ್ರೆ, ನಮಗೆ ಸ್ವಲ್ಪ ಅಮ್ಮನ ಮೇಲೆ ಪ್ರೀತಿ ಜಾಸ್ತಿ ಅಷ್ಟೆ.). ನನ್ನ ಸ್ಥಿತಿ ನೋಡಿ ಅವಳಿಗೆ ಪಾಪ ಅನ್ನಿಸ್ತೋ ವಿಷಯ ಹೇಳೋ ಕ್ರುಪೆ ತೋರಿದ್ಲು. ಎಂತದೋ ಮಾರಾಯಾ ಮಲಗಿದವನಿಗೆ ಏನಾಯ್ತು? ಕಾಳಿಂಗ ನಾವಡ ಮೈಮೇಲೆ ಬಂದಿದ್ನಾ ಅಂದ್ಲು. (ಆಗಿನ್ನೂ ಎಲ್ಲರು ಮಾತಾಡ್ಕೊಳ್ತಿದ್ದ ಕಾಲ - "ಲೋ ಸೂರು ಕೇಳಿದ್ಯೇನೊ ನಾವಡ ಹೋದ್ನಂತೆ ಮಾರಾಯ" ಅಂತ ಅಪ್ಪ ಹೇಳಿದ್ದನ್ನ ಕೇಳಿದ್ದೆ. ಆದರೆ ಅವರ್ಯಾರು ಅಂತ ಗೊತ್ತಿರಲಿಲ್ಲ.) ಅಮ್ಮ ಮತ್ತೆ ಬಿಡಿಸಿ ಹೇಳಿದ್ಲು. ನಿದ್ದೇಲೂ ಭಾಗವತಿಗೆ ಮಾಡ್ತಿದ್ಯಲ್ಲೋ ಮಗನೇ ಯಕ್ಷಗಾನ ಪೂರ್ತಿ ನೋಡಿದ್ಯಾ ಅಂದ್ಲು. ಹ್ನೂಂ ಅಂದೆ. ಆಮೇಲೆ ಒಂದೆರಡು ತಿಂಗಳು ಕೂತಲ್ಲಿ ನಿಂತಲ್ಲಿ ಇದೇ ಹಾಡು. ಅಪ್ಪನ ಕೈಲಿ ಬೈಸಿಕೊಂಡಿದ್ದು ಆಯಿತು. ಆದ್ರೆ ಇವತ್ತಿಗು ನಾವಡ ಮೈಮೇಲೆ ಬರೋದು ಮಾತ್ರ ನಿಲ್ಲಲಿಲ್ಲ.
ಇದೆಲ್ಲ ನಡೆದಿದ್ದು ನಾನು ಮೂರನೇ ಕ್ಲಾಸ್ ನಲ್ಲಿದ್ದಾಗ. ಅಪ್ಪ ಒಂದಿನ ಬೆಳಿಗ್ಗೆ ಅಮ್ಮನ ಹತ್ರ ಹೇಳ್ತಾ ಇದ್ದರು. ನಾನು ಅಲ್ಲೆ ಒಲೆ ಬುಡದಲ್ಲಿ ಚಳಿ ಕಾಯಿಸ್ತಾ ಕೂತಿದ್ದೆ. "ಯೆ ಇವತ್ತು ಸಂಜೆ ಯಕ್ಷಗಾನ ಇದ್ಯಲೇ? ಹೋಗೋಣ ರಾತ್ರಿ ಅಡುಗೆ ಬೇಗ ಮಾಡು" ಅಮ್ಮಂಗೆ ಅಂತಾ ಏನು ಆಸಕ್ತಿ ಇದ್ದ ಹಾಗೆ ಕಾಣ್ಲಿಲ್ಲ. ಚಿಟ್ಟಾಣಿ ಬರ್ತಿದಾನಂತೆ, ಸ್ವಲ್ಪ ಹೊತ್ತು ನೋಡಿ ಬರೋಣ. ಮಕ್ಕಳಿಗೂ ಒಂದು ಹೊಸತು ಅಂತ ಒತ್ತಿ ಹೇಳಿದ ಮೇಲೆ ಅಮ್ಮ ಒಪ್ಪಲೇಬೇಕಾಯಿತು. ನಂಗೆ ಅವತ್ತಿಡಿ ಏನೋ ಖುಶಿ. ಸಂಜೆ ಆಗುವುದಕ್ಕೇ ಕಾಯ್ತಾ ಇದ್ದ ನಾನು ಕ್ಲಾಸ್ ಮುಗಿಸಿ ನಲವತ್ತೇ ನಿಮಿಷಕ್ಕೆ ಮನೆ ಸೇರಿದ್ದೆ. ನಲವತ್ತೇ ನಿಮಿಷ ಯಾಕೆ ಅಂತಾನ? ಸ್ವಾಮಿ ನಾನು ಇರೋದು ಮಲೆನಾಡಿನ ಒಂದು ಹಳ್ಳಿ ಮೂಲೇಲಿ. ದಿನಾ ಕಿಲೋಮೀಟರ್ ಗಟ್ಟಲೆ ನಡೆದು ಶಾಲೆ ಸೇರಬೇಕಿತ್ತು. ನಮ್ಮೂರನಲ್ಲಿ ಒಂದು ವಿಶೇಷ ಅಂದ್ರೆ ಇಡೀ ಊರಿಗೆ ಒಂದೇ ಮನೆ. "ಅದೂ ಒಂದು ಊರ?" ಅಂತ ಯಾರಾದ್ರು ಕೇಳಿದ್ರೆ ಏನನ್ನಬೇಕು ಅಂತ ನಂಗೂ ಗೊತಾಗೋಲ್ಲ.
ಮನೆಗೆ ಬರ್ತಿದ್ದ ಹಾಗೆ ಅಮ್ಮನ ಹತ್ರ ಅಕ್ಕಂದಿರ ಕಂಪ್ಲೆಂಟ್.
"ಅಮ್ಮ ಅವನು ಮುಂದೆ ಮುಂದೆ ಓಡ್ತಾ ಇದ್ದ ಕೈ ಹಿಡ್ಕೊಂಡ್ರು ನಮ್ಮನ್ನೇ ಎಳ್ಕೊಂಡು ಹೋಗ್ತಾ ಇದ್ದ."
"ಯಾಕೋ ಅವ್ರೊಟ್ಟಿಗೆ ಸುಮ್ನೆ ಬಂದ್ರೆ ಏನಾಗುತ್ತೊ ನಿಂಗೆ" ಅಂತ ಬೈದು ಕೆಲಸದಲ್ಲಿ ತೊಡಗಿದಳು.
ಅಮ್ಮನ ಹಿಂದೆ ಮುಂದೇನೆ ಸುತ್ತಿ ಅಂತೂ ರಾತ್ರಿ ಊಟನೂ ಅರೆ ಬರೆ ಮುಗ್ಸಿ ಹೊರಟಿದ್ದಾಯ್ತು.
ದೇವಸ್ಥಾನದ ಬಯಲಿನಲ್ಲಿ ಆಟಕ್ಕೆ ಬೇಕಾದ ಎಲ್ಲ ಸಿದ್ದತೆ ಮಾಡಲಾಗಿತ್ತು.ಎಲ್ಲ ಮಾತಾಡ್ಕೊಳ್ತಾ ಇದ್ರು "ಪ್ರಸಂಗ ಶನಿ ಮಹಾತ್ಮೆ ಅಂತೆ, ಚಿಟ್ಟಾಣಿ ಬರ್ತಾರಂತೆ" ನಂಗೆ ಏನು ಅರ್ಥ ಆಗ್ತಾ ಇರ್ಲಿಲ್ಲ. ಅಷ್ಟರಲ್ಲಿ ರಂಗ ಮಂಟಪದ ತೆರೆ ಸರಿಸಲಾಯಿತು. ಅಪ್ಪ ನಂಗೆ ಎಲ್ಲ ವಿವರಿಸಿ ಹೇಳಿದ್ರು . ಅದು ಚಂಡೆ, ತಾಳಾ, ಅವರು ಭಾಗವತರು, ಈಗ ಪಾತ್ರದಾರಿಗಳು ಬರ್ತಾರೆ ಹೀಗೆ ಎಲ್ಲಾ.... ಮೊದಲ ಬಾರಿಗೇ ನನಗೆ ತುಂಬಾ ಖುಶಿ ಆಗಿತ್ತು. ಯಕ್ಷಗಾನದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿದ್ದೆ. ಚಿಟ್ಟಾಣಿ ಅವರ ನೃತ್ಯ, ಅವರ ಸಂಭಾಷಣೆ, ಪ್ರತಿಯೊಂದು ರಸಗಳನ್ನ ವ್ಯಕ್ತಪಡಿಸುವ ರೀತಿ ಅದ್ಭುತ, ಈಗಲೂ ಅದು ನೆನಪಾಗ್ತಿರುತ್ತೆ.
ರಂಗ ನಾಯಕ ರಾಜೀವ ಲೋಚನ
ರಮಣ ನೀ ಬೆಳಗಾಯಿತೇಳೆನ್ನುತಾ.....
ತಾಂಗದಿನ್ನ ದಿನ್ನ ದೀಮ್
ಎಂದು ಮಂಗಳ ಹಾಡಿದ್ರೂ ನನಗೆ ಏಳೋಕೆ ಮನಸ್ಸೇ ಇರ್ಲಿಲ್ಲ. ಮಾರನೇ ದಿನ ನಮಗೆ ದೂರದಲ್ಲೆಲ್ಲೊ ಯಕ್ಶಗಾನ ನಡೀತಿದಿಯೇನೋ ಅಂತ ಅನ್ನುಸ್ತಿತ್ತು. ನಾನು ಮತ್ತೆ ನನ್ನ ಅಕ್ಕ ಇಬ್ರು ರಾತ್ರಿ ಯಕ್ಷಗಾನ ನಡಿತಾ ಇದ್ದ ಜಾಗಕ್ಕೆ ಮತ್ತೊಂದ್ಸರಿ ಹೋಗಿ ನೋಡ್ಕೊಂಡು ಬಂದಿದ್ವಿ...

ಗುರುವಾರ, ಮಾರ್ಚ್ 4, 2010

ನನ್ನ (ಅ)ವಳು

ಒಂದೇ ಬಾರಿ ನನ್ನ ನೋಡಿ ಮಂದ ನಗೀ ಹಾಂಗ ಬೀರಿ
ಮುಂದ ಮುಂದ ಮುಂದಾ ಹೋದ ಹಿಂದ ನೋಡದ ಗೆಳತೀ ಹಿಂದ ನೋಡದ...........

ಗೆಳತಿ ಕಿವಿಯಲ್ಲಿ ನೀನು ಪಿಸುಗುಟ್ಟಿದ್ದು ಇದೇ ಹಾಡನ್ನಾ? ಅಥವಾ ಇದು ನನ್ನ ಭ್ರಮೆನಾ? ತಿರುಗಿ ಒಮ್ಮೆ ನಿನ್ನನ್ನ ನೋಡ್ಬೇಕು ಅನ್ನಿಸ್ತಿದೆ ಕಣೇ. ಆದ್ರೆ. ಎಲ್ಲಿ ನೀನು ತಪ್ಪು ತಿಳೀತಿಯೇನೋ ಅನ್ನೋ ಭಯ. ಆಗ್ಲೆ ಮೂರು ಸಾರಿ ಮುಗ್ಗರಿಸಿಬಿಟ್ಟಿದೀನಿ. ಇವನಿಗೆ ಕಣ್ಣು ಸರಿಯಿಲ್ಲ ಅಥವಾ ನಡೆಯೋಕೆ ಬರಲ್ಲ ಅಂತ ಯೋಚಿಸ್ತಿದೀಯಾ? ಇಲ್ವೇ ಇದು ನನ್ನ ತಪ್ಪಲ್ಲ. ದೇವರು ನಂಗೆ ಎಲ್ಲೂ ಮೋಸ ಮಾಡಿಲ್ಲ. ಇದಕ್ಕೆ ಕಾರಣ ಅವನು ನಿಂಗೆ ಕೊಟ್ಟಿರೊ ಸೌಂದರ್ಯದ ಒಡವೆ. ನಿನ್ನ ತುಟಿಯಂಚಿನ ನಗು, ಮೋಹಕ ನೋಟ,....ಸಾಕು ಸಾಕು ನಾನು ಹೇಳ್ತಾ ಹೋದ್ರೆ ನಿಂಗೆ ಜಂಭ ಬಂದುಬಿಡುತ್ತೆ.
ಇನ್ನು ಎರಡು ಹೆಜ್ಜೆ ಮುಂದೆ ಹೋದ್ರೆ ತಿರುವು ಬಂದುಬಿಡುತ್ತೆ. ಆದ್ರೆ ನನ್ನ ಜೀವನ ಆಗ್ಲೆ ತಿರುವು ಪಡ್ಕೊಂಡುಬಿಟ್ಟಿದೆ ಕಣೆ. ನಂಗೆ ಈ ತಿರುವು ನಿನ್ನ ಕೈ ಹಿಡ್ಕೊಂಡು ದಾಟೋ ಆಸೆ. ಒಮ್ಮೆ ತಿರುಗಿ ನೋಡ್ಲಾ? ನೀನು ಅಲ್ಲೆ ನನ್ನ ನೋಡ್ತಾ ನಿಂತಿದಿಯಾ ಅಂತ ಮನಸ್ಸು ಹೇಳ್ತಿದೆ. ಅಮಿತಾಬ್ ತರ ಒಮ್ಮೆ ಹಾಡಿ ನಿನ್ನ ಒಲಿಸಿಕೊಳ್ಳಲಾ?

ಕಭೀ ಕಭೀ ಮೆರೆ ದಿಲ್ ಮೆ ಕಯಾಲ್ ಆತಾ ಹೈ...
ತುಜೇ ಜಮೀ ಪೆ ಬುಲಾಯಾ ಗಯಾ ಹೈ ಮೇರೆ ಲಿಯೆ...

ಉಹ್ನುಂ ಇದು ಹೇಳೋಣ ಅಂದ್ರೆ ಆ ಸಿನೆಮಾದಲ್ಲಿ ಅಮಿತಾಬ್ ಗೆ ಅವಳು ಸಿಗೋದಿಲ್ಲ. ಅದಕ್ಕೆ ನಿನ್ನನ್ನು ಕಳ್ಕೊಳೊ ಭಯ. ನಿನ್ನ ಪಡ್ಕೊಳೋಕ್ ಮುಂಚೆನೆ ನಿನ್ನ ನನ್ನವಳು ಅನ್ನೋ ತರ ಯೋಚಿಸ್ತಿದೀನಿ. ಕಳ್ಕೊಂಡು ಬಿಡ್ತಿನೇನೋ ಅನ್ನೋ ಭಯ ಬೇರೆ. ತಿರುವು ದಾಟೋ ಮುಂಚೆ ಹಿಂತಿರುಗಿ ಒಮ್ಮೆ ನೋಡ್ಲಾ? ನಿನ್ನ ಹೆಜ್ಜೆ ಸದ್ದು ಕೇಳಿಸ್ತಾ ಇದೆ. ಆದ್ರೆ ಅದರ ಸಪ್ಪಳ ನನ್ನಿಂದ ದೂರಾಗ್ತಾ ಇದೆ ಅನ್ನಿಸ್ತಿದೆ.

ಓ ಲಲನೆ, ಸುಮ ನಯನೆ
ನಿಲ್ಲು ನುಡಿ ಕೇಳ್ ಚಂದಿರ ವದನೆ!!
ನಾ ತಳೆದಿಹೆ ನಿನ್ನಲ್ಲಿ ಬಲು ಘನ ಪ್ರೇಮ
ಒಲವಿಂದಲಿ ನೀ ತಿಳುವೈ ಈ ಮನವ!!

....ಧಾರೇಶ್ವರರ ತರಹ ಹಾಡಿ ಬಿಡಬೇಕು ಅನ್ನಿಸ್ತಿದೆ. ಆದ್ರೆ ನನ್ನಲ್ಲಿ ಆ ಶಕ್ತಿಯಿಲ್ಲ. ನನ್ನ ಹೆಂಬೇಡಿ ಅಂತ ಅಂದ್ಕೋಬೇಡ. ಬವರವಾದರೆ ಹರನ ವದನಕೆ ಬೆವರ ತಹೆನ್ .. ಅಂತ ಹೇಳದೇ ಇದ್ರು ನನಗೆ ಹೆದರಿಕೆ ಅನ್ನೋದು ಇವತ್ತು ಬಿಟ್ಟು ಇನ್ಯಾವತ್ತು ಆಗಿದ್ದೇ ಇಲ್ಲ. ಯಾಕಂದ್ರೆ ಪುಸ್ತಕನೇ ಮುಟ್ಟದೇ ಪರೀಕ್ಷೆ ಬರೆಯೋಕೆ ಹೋಗಿದ್ದಿದೆ ಚೂರು ಭಯ ಇಲ್ಲದೆ. ಆದ್ರೆ ಇವತ್ತು....
....ತತ್ ಈ ಹಾಳು ಮೊಬೈಲ್ ಈಗಲೇ ಹೊಡ್ಕೋಬೇಕಿತ್ತಾ. ಓಹ್ ನಾನೆಲ್ಲಿದಿನಿ. ಆಗ್ಲೇ ಆ ತಿರುವು ದಾಟಿ ತುಂಬಾ ಮುಂದೆ ಬಂದಿದಿನಿ. ನೀನು ಯಾವ ಕಡೆ ಹೋದಿ ನನ್ಗೆ ಗೊತ್ತಿಲ್ಲ. ನಿನ್ನ ಹೆಸರು ಉಹ್ನುಂ ಗೊತ್ತಿಲ್ಲ. ಮತ್ತೆ ಆ ಹಾಡು..... ಆ ಹಾಡು ನೀನು ಹಾಡೋಕೆ ಹೇಗೆ ಸಾದ್ಯ? ನಾನು ಗೋವಾದಲ್ಲಿದಿನಿ ಅಂತನೂ ಮರ್ತೋಗಿತ್ತು ನೋಡು. ಆದ್ರೂ ನಿನು ನನ್ನ ತರ ಗೋವ ಅತಿಥಿ ಯಾಕಾಗಿರಬಾರದೂ????? ಮತ್ತೆ ನನ್ನ ಬಾಸ್ ಬಿ ವಿ ರಾಯರ ಆ ಮೊಬೈಲ್ ಕಾಲರ್ ಟೋನ್ ರಿಂಗಣಿಸುತ್ತಿತ್ತು

ಮುಂದ ಮುಂದ ಮುಂದಾ ಹೋದ ಹಿಂದ ನೋಡದ ಗೆಳತೀ ಹಿಂದ ನೋಡದ...........
ನಾನು ಸಂಪೂರ್ಣ ವಾಸ್ತವಕ್ಕೆ ಬಂದಿದ್ದೆ.
ಮೆ ತೊ ಚಲಾ ಜಾವೂಂಗ
ವಾಪಸ್ ನ ಆವೂಂಗಾ
ಮೆ ತೆರೀ ಗಲಿಯಾಂ ಚೋಡಕೇ ಏ ಏ ಏ ಎನ್ನುತ್ತಾ ಗೋವಾದಿಂದ ಹೊರಬಿದ್ದೆ....

ಮಂಗಳವಾರ, ಮಾರ್ಚ್ 2, 2010

The Speaking Tree.

No man I am not telling you about comic story in which an ancient tree which tells the people about their future. Then what is this Speaking tree all about? As some of you have already guessed, it is the same, very famous Times of India column I am talking about.
Earlier I used to switch over to a new page without even bothering to see what it is, including the articles which are published in Vijaya Karnataka or some other news papers. I used to think that these central pages are dedicated to those people who are staying alone or his/her wife/husband is deaf. No body is there to hear him. So he is sending that bloody stuff’s to local newspaper editors. Two profits of that stuff are news paper agency can sell with a tag “more number of pages for only 2Rs.” And other is it adds to a weight when the reader sell that to a waste paper collector.
One day my sister told me to read one of the article from speaking tree and it changed my opinion about these centre pages and I started reading all the newspaper articles, especially Speaking tree which I never missed afterwards.
One special thing about this speaking tree is everyday it highlights on new thing. You don’t need to remember yesterday where it was stopped. At the same time it does not belong to any religion. The excerpts are from the different religions all over the world. After reading, you will never get disappointed. It always contains a beautiful message. It is upadesha, advice based on a logical, scientific exposition on the human personality. Reflect on these principles, experiment with them and draw your own conclusions just as you would with physics or chemistry.
You might be thinking why I am telling all these things here? Right, the thing is Times of India after successful completion of rolling out of speaking tree books, now adding one more supplement to its Sunday edition from March.
As D.V.G says ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು.... when you adopt these hidden messages in your life, the journey becomes smooth and will be full of happiness.
Thanks to Times of India.