ಬುಧವಾರ, ಫೆಬ್ರವರಿ 24, 2010

ದಾಸವಾಣಿ

(ಪುರಂದಾಸರ ಕೈಲಾಸವಾಸ ಗೌರೀಶ ಈಶ ಕವನದಿಂದ ಸ್ಪೂರ್ತಿ ಪಡೆದದ್ದು)

ಕೈಲಾಸವಾಸ ಸಾಕಾಯ್ತು ಇ ದೇಶ
ತೈಲ ದಾರೆಯಂತೆ ಸುರಿಯುತಿದೆ ಹಿಮವಿಲ್ಲಿ !!ಪ!!

ಹಣವು ಕಾರಣವಲ್ಲ ಇ ಪ್ರವಾಸಕ್ಕೆಲ್ಲ
ಅನಲಾಕ್ಷ ನಿನ್ನ ಕ್ರುಪೆ ಇಲ್ಲದೇ
ಮನಕೆ ಕ್ಷಣ ಸುಖ ನೀಡಿ
ನೆಲೆಗೊಳಿಸು ಈ ದೇಹವ
ತಾಯಿನಾಡ ನೆಲದಲೀ !!೧!!

ಹರಿಭಕ್ತಿ ಸಾರ

ದೀನ ನಾನು ಸಮಸ್ತ
ಲೋಕಕೆ ದಾನಿ ನೀನು
ವಿಚಾರಿಸಲು ಮತಿ ಹೀನ ನಾನು ಕೈವಲ್ಯ ಪತಿ ನೀನು!
ಏನ ಬಲ್ಲೆನು ನಾನು
ನಡೆಸು ಜ್ನಾನ ಮೂರುತಿ ನೀನು
ನಿನ್ನ ಸಮಾನರುಂಟೆ ದೇವ ರಕ್ಷಿಸು ನಮ್ಮನನವರತ!!೧!!

ಗಿಳಿಯ ಮರಿಯನು ತಂದು
ಪಂಜರದೊಳಗೆ ಪೋಶಿಸಿ, ಕಲಿಸಿ
ಮ್ರುದು ನುಡಿಗಳನು ಲಾಲಿಸಿ ಕೇಳ್ವ ಪರಿಣಿತರಂತೆ ನೀನೆಮಗೆ!
ತಿಳಿಹು ಮತಿಯನು ಎನ್ನ
ಜಿಹ್ವೆಗೆ ಮೊಳಗುವಂದದಿ ನಿನ್ನ
ನಾಮಾವಳಿಯ ಪೊಗಳಿಕೆಯನಿತ್ತು ರಕ್ಷಿಸು ನಮ್ಮನನವರತ!!೨!!